ಅಂತರಂಗದ ವಿಜ್ಞಾನ - ಆನಂದಕ್ಕೆ ಯೋಗಿಯ ಕೈಪಿಡಿ (Inner Engineering: A Yogi’s Guide to Joy, Kannada Edition)
Delivery Pincode

- Free Shipping on all orders of Rs 950 and above.
- All orders shall be dispatched within 24-48 hours except on bank holidays
- Delivery within India is usually completed within 5 - 10 working days depending on the location.
ಆಧುನಿಕ ಯುಗದಲ್ಲಿ 'ಇನ್ನರ್ ಇಂಜಿನಿಯರಿಂಗ್' ಯೋಗ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕತೆಯನ್ನು ಮರುವ್ಯಾಖ್ಯಾನಿಸಿರುವ ಸದ್ಗುರುಗಳು ಆಧ್ಯಾತ್ಮಿಕತೆಗೆ ಒಂದು ಹೊಸ ಅರ್ಥವನ್ನೇ ನೀಡಿದ್ದಾರೆ. ಈ ಹೊಸ ವ್ಯಾಖ್ಯಾನವು ವಿಶೇಷವಾಗಿ ಇಂದಿನ ಪೀಳಿಗೆಯವರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದ್ದರಿಂದಲೇ ಪ್ರಪಂಚದ ಅನೇಕ ದೇಶಗಳ ಯುವಜನರು ಸದ್ಗುರುಗಳ ವಿಚಾರಗಳಿಗೆ ಮನಸೋತಿದ್ದಾರೆ. ಇದಕ್ಕೆ ಕಾರಣ ನನಗನಿಸುವಂತೆ ಸದ್ಗುರುಗಳು ಯುವಜನರ ಭಾಷೆಯನ್ನು ಅರ್ಥೈಸಿಕೊಂಡಿರುವುದೇ ಆಗಿದೆ. ಅವರು ಮಾತನಾಡುವ ಪ್ರತಿಯೊಂದು ಪದವೂ ಆಂತರಿಕ ಅನುಭವದ ಬೆಳಕಿನಿಂದ ತುಂಬಿದೆ. ಅಂಧವಿಶ್ವಾಸ ಮತ್ತು ತಪ್ಪು ತಿಳುವಳಿಕೆಗಳಿಂದ ಮೈಲುಗಳಷ್ಟು ದೂರವಿರುವ ಸದ್ಗುರುಗಳು ಆಂತರಿಕ ವಿಜ್ಞಾನದ ತಂತ್ರಜ್ಞಾನವನ್ನು ಈ ಪುಸ್ತಕದ ಮೂಲಕ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದಾರೆ.
Product Details | ಈ ಪುಸ್ತಕದ ಮೂಲಕ, ಸಂತೋಷವನ್ನು ನಿಮ್ಮ ಸದಾಕಾಲದ ಜೊತೆಗಾರನನ್ನಾಗಿ ಮಾಡಲು ಸಹಾಯ ಮಾಡುವುದು ನನ್ನ ಉದ್ದೇಶ. ಅದನ್ನು ಸಾಧ್ಯವಾಗಿಸಲು ಈ ಪುಸ್ತಕವು ಒಂದು ಧರ್ಮೋಪದೇಶವನ್ನು ನೀಡುವುದಿಲ್ಲ, ಬದಲಾಗಿ ಒಂದು ವಿಜ್ಞಾನವನ್ನು ನೀಡುತ್ತದೆ; ಒಂದು ಬೋಧನೆಯನ್ನು ನೀಡುವುದಿಲ್ಲ, ಬದಲಾಗಿ ಒಂದು ತಂತ್ರಜ್ಞಾನವನ್ನು ನೀಡುತ್ತದೆ; ಒಂದು ಕಟ್ಟಳೆಯನ್ನು ನೀಡುವುದಲ್ಲ, ಬದಲಾಗಿ ಒಂದು ಮಾರ್ಗವನ್ನು ನೀಡುತ್ತದೆ. ಇದು ವಿಜ್ಞಾನವನ್ನು ಅನ್ವೇಷಿಸುವ, ತಂತ್ರಜ್ಞಾನವನ್ನು ಅನ್ವಯಿಸಿಕೊಳ್ಳುವ, ಮಾರ್ಗವನ್ನು ಕ್ರಮಿಸುವ ಸಮಯ. ಈ ಪ್ರಯಾಣದಲ್ಲಿ, ‘ಗುರು’ ಎಂಬುವವರು ಒಂದು ಗುರಿಯಲ್ಲ, ಬದಲಾಗಿ ಒಂದು ನಕ್ಷೆ. -ಸದ್ಗುರು |
---|
-
I want to know about that bookMy friend told me about this book
Posted on