ಅಂತರಂಗದ ವಿಜ್ಞಾನ - ಆನಂದಕ್ಕೆ ಯೋಗಿಯ ಕೈಪಿಡಿ (Inner Engineering: A Yogi’s Guide to Joy, Kannada Edition)
Delivery Options
Free shipping above Rs 950
Within 24-48 hours Fast Dispatches
Secure Payments
Produce of India
Holistic Well-being
Product Details
ಈ ಪುಸ್ತಕದ ಮೂಲಕ, ಸಂತೋಷವನ್ನು ನಿಮ್ಮ ಸದಾಕಾಲದ ಜೊತೆಗಾರನನ್ನಾಗಿ ಮಾಡಲು ಸಹಾಯ ಮಾಡುವುದು ನನ್ನ ಉದ್ದೇಶ. ಅದನ್ನು ಸಾಧ್ಯವಾಗಿಸಲು ಈ ಪುಸ್ತಕವು ಒಂದು ಧರ್ಮೋಪದೇಶವನ್ನು ನೀಡುವುದಿಲ್ಲ, ಬದಲಾಗಿ ಒಂದು ವಿಜ್ಞಾನವನ್ನು ನೀಡುತ್ತದೆ; ಒಂದು ಬೋಧನೆಯನ್ನು ನೀಡುವುದಿಲ್ಲ, ಬದಲಾಗಿ ಒಂದು ತಂತ್ರಜ್ಞಾನವನ್ನು ನೀಡುತ್ತದೆ; ಒಂದು ಕಟ್ಟಳೆಯನ್ನು ನೀಡುವುದಲ್ಲ, ಬದಲಾಗಿ ಒಂದು ಮಾರ್ಗವನ್ನು ನೀಡುತ್ತದೆ. ಇದು ವಿಜ್ಞಾನವನ್ನು ಅನ್ವೇಷಿಸುವ, ತಂತ್ರಜ್ಞಾನವನ್ನು ಅನ್ವಯಿಸಿಕೊಳ್ಳುವ, ಮಾರ್ಗವನ್ನು ಕ್ರಮಿಸುವ ಸಮಯ. ಈ ಪ್ರಯಾಣದಲ್ಲಿ, ‘ಗುರು’ ಎಂಬುವವರು ಒಂದು ಗುರಿಯಲ್ಲ, ಬದಲಾಗಿ ಒಂದು ನಕ್ಷೆ. -ಸದ್ಗುರು
Product Description
ಆಧುನಿಕ ಯುಗದಲ್ಲಿ 'ಇನ್ನರ್ ಇಂಜಿನಿಯರಿಂಗ್' ಯೋಗ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕತೆಯನ್ನು ಮರುವ್ಯಾಖ್ಯಾನಿಸಿರುವ ಸದ್ಗುರುಗಳು ಆಧ್ಯಾತ್ಮಿಕತೆಗೆ ಒಂದು ಹೊಸ ಅರ್ಥವನ್ನೇ ನೀಡಿದ್ದಾರೆ. ಈ ಹೊಸ ವ್ಯಾಖ್ಯಾನವು ವಿಶೇಷವಾಗಿ ಇಂದಿನ ಪೀಳಿಗೆಯವರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಆದ್ದರಿಂದಲೇ ಪ್ರಪಂಚದ ಅನೇಕ ದೇಶಗಳ ಯುವಜನರು ಸದ್ಗುರುಗಳ ವಿಚಾರಗಳಿಗೆ ಮನಸೋತಿದ್ದಾರೆ. ಇದಕ್ಕೆ ಕಾರಣ ನನಗನಿಸುವಂತೆ ಸದ್ಗುರುಗಳು ಯುವಜನರ ಭಾಷೆಯನ್ನು ಅರ್ಥೈಸಿಕೊಂಡಿರುವುದೇ ಆಗಿದೆ. ಅವರು ಮಾತನಾಡುವ ಪ್ರತಿಯೊಂದು ಪದವೂ ಆಂತರಿಕ ಅನುಭವದ ಬೆಳಕಿನಿಂದ ತುಂಬಿದೆ. ಅಂಧವಿಶ್ವಾಸ ಮತ್ತು ತಪ್ಪು ತಿಳುವಳಿಕೆಗಳಿಂದ ಮೈಲುಗಳಷ್ಟು ದೂರವಿರುವ ಸದ್ಗುರುಗಳು ಆಂತರಿಕ ವಿಜ್ಞಾನದ ತಂತ್ರಜ್ಞಾನವನ್ನು ಈ ಪುಸ್ತಕದ ಮೂಲಕ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದಾರೆ.
More Information
SKU: | ME0000801900 |
Proceeds from Isha Life are used to bring well-being to people and communities.