Rudraksha Guide
ರುದ್ರಾಕ್ಷದ ಬಗ್ಗೆ ಮಾಹಿತಿಗಳು
ರುದ್ರಾಕ್ಷ ಎನ್ನುವುದು ಆಗ್ನೇಯ ಏಷ್ಯಾದ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯುವ ಒಂದು ಮರದ ಒಣಗಿಸಿದ ಬೀಜಗಳು. ಸಸ್ಯಶಾಸ್ತ್ರದ ಪ್ರಕಾರ ಇದರ ಹೆಸರು ಇಲೋಕಾರ್ಪಸ್ ಗ್ಯಾನಿಟ್ರಸ್. ಇದರ ಮೂಲದ ಬಗ್ಗೆ ಶಿವನಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ರುದ್ರಾಕ್ಷ ಎಂಬುದು ರುದ್ರ (ಶಿವ) ಮತ್ತು ಅಕ್ಷ (ಕಣ್ಣೀರು) ಎಂಬ ಪದಗಳಿಂದ ಆಗಿದೆ.
ದೈಹಿಕ ಮತ್ತು ಮಾನಸಿಕ ಸಂತುಲನೆಯನ್ನು ಕಾಪಾಡಿಕೊಳ್ಳುವಲ್ಲಿ ರುದ್ರಾಕ್ಷಗಳು ಬಹಳ ಪ್ರಯೋಜನಕಾರಿ. ಆಧ್ಯಾತ್ಮಿಕ ಸಾಧಕರ ಆಧ್ಯಾತ್ಮಿಕ ಪ್ರಗತಿಗೆ ಇದು ಬೆಂಬಲವನ್ನು ನೀಡುತ್ತದೆ. ಅನೇಕ ದೈಹಿಕ, ಮಾನಸಿಕ ಮತ್ತು ಮನೋ ದೈಹಿಕ ಕಾಯಿಲೆಗಳಿಗೆ ಇದರ ಔಷಧೀಯ ಗುಣಗಳನ್ನು ಜಗತ್ತಿನಾದ್ಯಂತ ಬಳಸಿಕೊಳ್ಳಲಾಗಿದೆ.
ಲಿಂಗ, ಸಂಸ್ಕೃತಿ, ಜನಾಂಗ, ಪ್ರದೇಶ, ಮತ ಭೇದವಿಲ್ಲದೆ ಎಲ್ಲರೂ ರುದ್ರಾಕ್ಷವನ್ನು ಧರಿಸಬಹುದು. ವ್ಯಕ್ತಿಯು ಜೀವನದ ಯಾವುದೇ ಘಟ್ಟದಲ್ಲಿದ್ದರೂ, ಅವರ ಮಾನಸಿಕ ಮತ್ತು ದೈಹಿಕ ಸ್ಥಿತಿ ಹೇಗೇ ಇದ್ದರೂ ಅದು ಲಾಭದಾಯಕ. ಮಕ್ಕಳು, ವಿದ್ಯಾರ್ಥಿಗಳು, ವಯಸ್ಕರು ಮತ್ತು ರೋಗಪೀಡಿತರು ಇದನ್ನು ಧರಿಸಿ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ದಯವಿಟ್ಟು ಪ್ರಶ್ನೆ 5ನ್ನು ನೋಡಿ.
ಗಾತ್ರವು ಏನೇ ಆಗಿದ್ದರೂ, ನಮ್ಮ ಎಲ್ಲಾ ಪಂಚಮುಖಿ ರುದ್ರಾಕ್ಷಗಳು ಒಂದೇ ರೀತಿಯ ಗುಣಮಟ್ಟ, ಪ್ರಭಾವ ಮತ್ತು ಲಾಭಗಳನ್ನು ಹೊಂದಿರುತ್ತವೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ಲಭ್ಯವಿರುವ 7 ಗಾತ್ರಗಳಲ್ಲಿ ಯಾವುದಾದರೂ ಒಂದನ್ನು ನೀವು ಆರಿಸಿಕೊಳ್ಳಬಹುದು. ಸಣ್ಣಗಾತ್ರದ ರುದ್ರಾಕ್ಷವು ಅಪರೂಪ. ಆದ್ದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು.
ನಾವು ಅರ್ಪಿಸುವ ರುದ್ರಾಕ್ಷ ಗಳನ್ನು ಜಾಗರೂಕತೆಯಿಂದ ಆರಿಸಿ, ಗುಣಮಟ್ಟಕ್ಕಾಗಿ ಪರೀಕ್ಷಿಸಿ ಪ್ರಾಣಪ್ರತಿಷ್ಠೆಗೊಳಿಸಲಾಗಿದೆ. ಪ್ರತಿಯೊಂದು ತರಹದ ರುದ್ರಾಕ್ಷದ ಪ್ರಯೋಜನಗಳು ಈ ಕೆಳಗಿನಂತಿದೆ:
- - ಪಂಚಮುಖಿ: ಐದು ಮುಖಗಳುಳ್ಳ ಈ ರುದ್ರಾಕ್ಷ ವನ್ನು 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಧರಿಸಬಹುದು. ಇದು ಅಂತರಂಗದ ಸ್ವಾತಂತ್ರ್ಯ ಮತ್ತು ಶುದ್ಧಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು.
- - ದ್ವಿಮುಖಿ: ಎರಡು ಮುಖಗಳುಳ್ಳ ಈ ರುದ್ರಾಕ್ಷವು ವಿವಾಹಿತರಿಗೆ ಸೂಕ್ತವಾದುದು. ವೈವಾಹಿಕ ಸಂಬಂಧಗಳಿಗೆ ಇದು ಬೆಂಬಲದಾಯಕ. ಇದನ್ನು ಪತಿ-ಪತ್ನಿಯರಿಬ್ಬರೂ ಧರಿಸಬೇಕು.
- - ಷಣ್ಮುಖಿ: ಆರು ಮುಖಗಳುಳ್ಳ ಈ ರುದ್ರಾಕ್ಷವು ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉದ್ದೇಶಿತವಾಗಿದೆ. ಇದು ಸಮರ್ಪಕವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕ.
- - ಗೌರಿಶಂಕರ: ಈ ರುದ್ರಾಕ್ಷ ಮಣಿಯು ಎರಡು ಮಣಿಗಳು ಬೆಸೆದಿರುವಂತೆ ತೋರುವುದು. 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಸಮೃದ್ಧಿಯನ್ನು ತರುವುದು, ಇಡಾ ಮತ್ತು ಪಿಂಗಳ ನಾಡಿಗಳನ್ನು ಸಮತೋಲನ ಗೊಳಿಸುವುದು ಮತ್ತು ಏಳು ಚಕ್ರಗಳನ್ನು ಸಕ್ರಿಯಗೊಳಿಸುವುದು.
ಹೊಸ ರುದ್ರಾಕ್ಷ ಮಣಿಗಳನ್ನು ಹದಗೊಳಿಸಲು ಮೊದಲು ಅವನ್ನು ತುಪ್ಪದಲ್ಲಿ 24 ಗಂಟೆಗಳ ಕಾಲ ಮುಳುಗಿಸಿಟ್ಟು ಆನಂತರ ಕೆನೆಭರಿತ ಹಾಲಿನಲ್ಲಿ ಮತ್ತೆ 24 ಗಂಟೆಗಳ ಕಾಲ ಮುಳುಗಿಸಿಡಬೇಕು. ನಂತರ ಅವನ್ನು ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಬೇಕು. ರುದ್ರಾಕ್ಷವನ್ನು ಸೋಪು ಅಥವಾ ಇತರೆ ಪದಾರ್ಥಗಳಿಂದ ತೊಳೆಯಬಾರದು. ಹದಗೊಳಿಸುವ ಈ ಪ್ರಕ್ರಿಯೆಯಿಂದ ರುದ್ರಾಕ್ಷದ ಬಣ್ಣವು ಬದಲಾಗಬಹುದು. ಇವು ನೈಸರ್ಗಿಕವಾದ ಮಣಿಗಳಾಗಿರುವುದರಿಂದ ಇದು ತೀರಾ ಸಹಜ. ಹದಗೊಳಿಸುವಾಗ ದಾರವೂ ಸ್ವಲ್ಪ ಬಣ್ಣವನ್ನು ಬಿಡುವುದು ಸಹಜ. ಈ ಕೆಳಗೆ ವಿವರಿಸಿದಂತೆ ಹದಗೊಳಿಸುವ ಪ್ರಕ್ರಿಯೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಮಾಡಬೇಕು.
ರುದ್ರಾಕ್ಷ ಮಣಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಹದಗೊಳಿಸಬೇಕು. ರುದ್ರಾಕ್ಷ ಮಾಲೆ ಅಥವಾ ಮಣಿಗಳನ್ನು ಹದಗೊಳಿಸಲು ಮೊದಲು ಅವನ್ನು ತುಪ್ಪದಲ್ಲಿ 24 ಗಂಟೆಗಳ ಕಾಲ ಮುಳುಗಿಸಿಟ್ಟು ಆನಂತರ ಕೆನೆಭರಿತ ಹಾಲಿನಲ್ಲಿ ಮತ್ತೆ 24 ಗಂಟೆಗಳ ಕಾಲ ಮುಳುಗಿಸಿಡಬೇಕು. ನಂತರ ಅವನ್ನು ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಬೇಕು. ರುದ್ರಾಕ್ಷವನ್ನು ಸೋಪು ಅಥವಾ ಇತರೆ ಪದಾರ್ಥಗಳಿಂದ ತೊಳೆಯಬಾರದು.
ಅದನ್ನು ಯಾವಾಗಲೂ ಧರಿಸಬಹುದು. ನೀವು ನಿದ್ರಿಸುವಾಗ ಮತ್ತು ಸ್ನಾನ ಮಾಡುವಾಗಲೂ ಅದನ್ನು ಧರಿಸಬಹುದು. ನೀವು ತಣ್ಣೀರು ಸ್ನಾನ ಮಾಡುತ್ತಿದ್ದು ರಾಸಾಯನಿಕ ಸೋಪನ್ನು ಬಳಸದೇ ಇದ್ದರೆ, ನೀರು ರುದ್ರಾಕ್ಷದ ಮೇಲೆ ಹರಿದು ನಿಮ್ಮ ದೇಹದ ಮೇಲೆ ಹರಿಯುವುದು ವಿಶೇಷವಾಗಿ ಒಳ್ಳೆಯದು. ಆದರೆ ನೀವು ರಾಸಾಯನಿಕ ಸೋಪು ಮತ್ತು ಬಿಸಿನೀರನ್ನು ಬಳಸುತ್ತಿದ್ದರೆ ರುದ್ರಾಕ್ಷವು ಗಟ್ಟಿಯಾಗಿ ಸ್ವಲ್ಪ ಸಮಯದ ನಂತರ ಒಡೆದುಹೋಗುತ್ತದೆ. ಆದ್ದರಿಂದ ಆ ಸಮಯದಲ್ಲಿ ರುದ್ರಾಕ್ಷವನ್ನು ಧರಿಸದೆ ಇರುವುದು ಒಳ್ಳೆಯದು.
ಇನ್ನಷ್ಟು ತಿಳಿಯಿರಿ
ಇಲ್ಲ. ಸಾಂಪ್ರದಾಯಿಕವಾಗಿ ಮಣಿಗಳ ಸಂಖ್ಯೆಯು 108+ಒಂದು ಬಿಂದು ಮಣಿ. 84+ಬಿಂದು ಮಣಿಗಿಂತ ಕಡಿಮೆ ಮಣಿಗಳಿರುವ ಮಾಲೆಯನ್ನು ವಯಸ್ಕರು ಧರಿಸದೇ ಇರುವುದು ಒಳ್ಳೆಯದು. ಅದಕ್ಕಿಂತ ಹೆಚ್ಚು ಎಷ್ಟು ಮಣಿಗಳಿದ್ದರೂ ಪರವಾಗಿಲ್ಲ! ರುದ್ರಾಕ್ಷ ಮಣಿಯ ಗಾತ್ರವನ್ನು ಅವಲಂಬಿಸಿ ಮಾಲೆಯಲ್ಲಿ ಇರುವ ಮಣಿಗಳ ಸಂಖ್ಯೆಯು ಬದಲಾಗುತ್ತದೆ.
ಎಲ್ಲಾ ಪಂಚಮುಖಿ ರುದ್ರಾಕ್ಷಗಳು ಒಂದೇ ರೀತಿಯ ಗುಣಮಟ್ಟ, ಪ್ರಭಾವ ಮತ್ತು ಲಾಭಗಳನ್ನು ಹೊಂದಿರುತ್ತವೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ಲಭ್ಯವಿರುವ 7 ಗಾತ್ರಗಳಲ್ಲಿ ಯಾವುದಾದರೂ ಒಂದನ್ನು ನೀವು ಆರಿಸಿಕೊಳ್ಳಬಹುದು. ಸಣ್ಣಗಾತ್ರದ ರುದ್ರಾಕ್ಷವು ಅಪರೂಪ. ಆದ್ದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು.
ಇಲ್ಲ. ನೀವು ನಿಮ್ಮ ರುದ್ರಾಕ್ಷವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ರುದ್ರಾಕ್ಷವು ಅದನ್ನು ಧರಿಸಿದವರೊಂದಿಗೆ ಹೊಂದಿಕೊಳ್ಳುತ್ತದೆ.
ರುದ್ರಾಕ್ಷವನ್ನು ರೇಷ್ಮೆ ಬಟ್ಟೆ ಅಥವಾ ತಾಮ್ರದ ಪಾತ್ರೆಯಲ್ಲಿ ಇಡುವುದು ಉಚಿತ. ಆದರೆ ನೆನಪಿಡಿ, ತಾಮ್ರವು ಹಾಲಿನ ಉತ್ಪನ್ನಗಳನ್ನು ಆಕ್ಸಿಡೈಸ್ ಮಾಡಬಲ್ಲದು. ಆದ್ದರಿಂದ ರುದ್ರಾಕ್ಷವನ್ನು ಹದಗೊಳಿಸುವಾಗ ತಾಮ್ರದ ಪಾತ್ರೆಯನ್ನು ಬಳಸಬಾರದು.
ಪಂಚಮುಖಿ ಮಾಲೆಯ ಬಿಂದು ಮಣಿಯು ಕುತ್ತಿಗೆಯ ನಿರ್ದಿಷ್ಟ ಜಾಗದಲ್ಲಿ ಇರಬೇಕೆಂದೇನಿಲ್ಲ. ನೀವು ನಡೆದಾಡುವಾಗ, ಮಲಗುವಾಗ, ಸಾಧನೆಯನ್ನು ಮಾಡುವಾಗ ರುದ್ರಾಕ್ಷವು ಜರಗುತ್ತದೆ. ಬಿಂದು ಮಣಿಯನ್ನು ಎದೆಯ ಮಧ್ಯಭಾಗಕ್ಕೆ ತಂದಿಡುವುದು ಒಳ್ಳೆಯದು. ಆದರೆ ನೀವು ಮತ್ತೆ ನಡೆದಾಡಿದರೆ, ಬಿಂದುವೂ ಜರುಗುವುದು. ಅದು ಪರವಾಗಿಲ್ಲ.
ರುದ್ರಾಕ್ಷಕ್ಕೆ ಸ್ವಭಾವತಃ ಒಂದು ನಿರ್ದಿಷ್ಟ ಗುಣವಿರುತ್ತದೆ. ಆದ್ದರಿಂದ ರುದ್ರಾಕ್ಷವನ್ನು ಗೌರವಯುತವಾಗಿ ಮತ್ತು ಕಾಳಜಿ ಸಹಿತವಾಗಿ ಧರಿಸುವುದು ಮುಖ್ಯ. ರುದ್ರಾಕ್ಷವನ್ನು ಆಭರಣಗಳಂತೆ ಧರಿಸಿ ಕಳಚಿಡಬಾರದು. ಓರ್ವ ವ್ಯಕ್ತಿಯು ರುದ್ರಾಕ್ಷವನ್ನು ಧರಿಸುವ ನಿರ್ಧಾರವನ್ನು ಮಾಡಿದಾಗ ಅದು ಅವರದ್ದೇ ಒಂದು ಭಾಗವಾಗಬೇಕು.
ಯಾರಾದರೂ ಬಹಳ ಸಮಯದವರೆಗೆ ತಮ್ಮ ರುದ್ರಾಕ್ಷವನ್ನು ಧರಿಸದಿರುವ ನಿರ್ಧಾರ ಮಾಡಿದರೆ, ಅದನ್ನು ರೇಷ್ಮೆಯ ಬಟ್ಟೆಯಲ್ಲಿಟ್ಟು ಪೂಜೆಯ ಕೋಣೆಯಲ್ಲಿಡಬೇಕು.ಕೆಲವೊಂದು ರೀತಿಯ ಸನ್ನಿವೇಶಗಳು ರುದ್ರಾಕ್ಷಕ್ಕೆ ಸೂಕ್ತವಲ್ಲ. ಉದಾಹರಣೆಗೆ, ರುದ್ರಾಕ್ಷವನ್ನು ಸಿಮೆಂಟ್ ನೆಲದ ಮೇಲೆ 48 ದಿನ ಮಂಡಲ ಕಾಲ ಅಥವಾ ಹೆಚ್ಚು ಕಾಲ ಇಟ್ಟಿದ್ದರೆ ಅದನ್ನು ಮತ್ತೆ ಬಳಸಬಾರದು. ಹದಗೊಳಿಸುವ ಪ್ರಕ್ರಿಯೆಯು ಇದನ್ನು ಸರಿಪಡಿಸಲಾರದು. ಈ ಸ್ಥಿತಿಯಲ್ಲಿರುವ ರುದ್ರಾಕ್ಷವನ್ನು ಸಾಧ್ಯವಿದ್ದಲ್ಲಿ ಮಣ್ಣಿನಲ್ಲಿ ಹೂಳಬೇಕು, ಅಥವಾ ನದಿ ಅಥವಾ ಬಾವಿಯಲ್ಲಿ ವಿಸರ್ಜಿಸಬೇಕು.
ನಿರ್ವಹಣೆ
ಬಿರುಕು ಬಿಟ್ಟಿರುವ ಮಣಿಗಳನ್ನು ಮಾಲೆಯಿಂದ ತೆಗೆಯಬೇಕು. ಏಕೆಂದರೆ ಅವುಗಳ ಪ್ರಾಣಶಕ್ತಿಯು ಏರುಪೇರಾಗಿರುತ್ತದೆ. ಧರಿಸುವವರಿಗೆ ಅದು ಸೂಕ್ತವಲ್ಲ. ಮಾಲೆಯಲ್ಲಿರುವ ಒಟ್ಟು ಮಣಿಗಳ ಸಂಖ್ಯೆಯು 84+ಬಿಂದು ಮಣಿಗಿಂತ ಹೆಚ್ಚು ಇರುವವರೆಗೆ ಪ್ರತ್ಯೇಕ ಮಣಿಗಳನ್ನು ಬದಲಿಸುವ ಅಗತ್ಯವಿಲ್ಲ. 14 ವರ್ಷ ಮೇಲ್ಪಟ್ಟವರಿಗೆ ಮಣಿಗಳ ಸಂಖ್ಯೆಯು ಇದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಇರಬಹುದು. ಬಿರುಕು ಬಿಟ್ಟಿರುವ ಮಣಿಗಳನ್ನು ತೆಗೆಯಲು ಮಾಲೆಯನ್ನು ಬಿಚ್ಚಿ ಮತ್ತೆ ಕಟ್ಟಬಹುದು. ಮತ್ತೆ ಪೋಣಿಸಿ ಕಟ್ಟುವಾಗ ಯಾವುದೇ ಮಣಿಯು ಬಿಂದು ಮಣಿ ಆಗಬಹುದು. ಮೊದಲು ಬಳಸಿದ್ದ ಮಣಿಯೇ ಆಗಬೇಕೆಂದೇನಿಲ್ಲ. ಹದಿನಾಲ್ಕು ವರ್ಷಕ್ಕಿಂತ ಕೆಳಗಿನವರು ಷಣ್ಮುಖಿ ರುದ್ರಾಕ್ಷವನ್ನು ಮಾತ್ರ ಧರಿಸಬೇಕು.
ರುದ್ರಾಕ್ಷದ ಪೂರ್ತಿ ಲಾಭವನ್ನು ಪಡೆದುಕೊಳ್ಳಲು ಮಾಲೆಯಲ್ಲಿನ ಮಣಿಗಳು ಯಾವಾಗಲೂ ಒಂದಕ್ಕೊಂದು ಸೋಕುತ್ತಿರಬೇಕು. ಇದಕ್ಕೆ ಮಾಲೆಯಲ್ಲಿನ ಪ್ರಾಣಶಕ್ತಿಯ ಸಂವಹನೆಯೊಂದಿಗೆ ಸಂಬಂಧವಿದೆ. ಮಾಲೆಯನ್ನು ಬಹಳ ಬಿಗಿಯಾಗಿ ಕಟ್ಟಬಾರದು ಏಕೆಂದರೆ ಮಣಿಗಳು ಒಂದಕ್ಕೊಂದು ಒತ್ತಿ ಹೋಗಿ ಬಿರುಕುಬಿಡುವ ಸಾಧ್ಯತೆಗಳಿರುತ್ತವೆ. ಮಣಿಗಳು ಒಂದಕ್ಕೊಂದು ತಾಗುವಂತೆ ಮೆದುವಾಗಿ ಕಟ್ಟಿರುವುದು ಒಳ್ಳೆಯದು.
ರುದ್ರಾಕ್ಷಗಳು ವಿಶಿಷ್ಟವಾದ ಸಂಯೋಜನೆಯನ್ನು ಹೊಂದಿರುವ ನೈಸರ್ಗಿಕ ಬೀಜಗಳಾಗಿರುವುದರಿಂದ ಅವನ್ನು ನೈಸರ್ಗಿಕ ಪಾತ್ರೆಗಳಲ್ಲಿ ಇಡುವುದು ಅತ್ಯುತ್ತಮ. ಅವನ್ನು ಹದಗೊಳಿಸುವಾಗ ಮಣ್ಣು, ಗಾಜು ಅಥವಾ ಮರದ ಪಾತ್ರೆಗಳನ್ನು ಬಳಸುವುದು ಸೂಕ್ತ. ಪರ್ಯಾಯವಾಗಿ ಚಿನ್ನ ಅಥವಾ ಬೆಳ್ಳಿಯ ಪಾತ್ರೆಯನ್ನೂ ಲಭ್ಯವಿದ್ದಲ್ಲಿ ಬಳಸಬಹುದು. ಹದಗೊಳಿಸುವಾಗ ತಾಮ್ರದ ಪಾತ್ರೆಯನ್ನು ಬಳಸದೆ ಇರುವುದು ಮುಖ್ಯ. ಏಕೆಂದರೆ ತುಪ್ಪ ಮತ್ತು ಹಾಲು ತಾಮ್ರದೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ಇತರ ಸಮಯಗಳಲ್ಲಿ ರುದ್ರಾಕ್ಷವನ್ನು ತಾಮ್ರದ ಪಾತ್ರೆಯಲ್ಲಿ ಇಡಬಹುದು. ರುದ್ರಾಕ್ಷವನ್ನು ಇಡಲು ಅಥವಾ ಹದಗೊಳಿಸಲು ಪ್ಲಾಸ್ಟಿಕ್ ಪಾತ್ರೆಯನ್ನು ಬಳಸದೆ ಇರುವುದು ಒಳ್ಳೆಯದು, ಏಕೆಂದರೆ ಪ್ಲಾಸ್ಟಿಕ್ ಪ್ರತಿಕ್ರಿಯಿಸಿ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆಗೊಳಿಸುವುದು.
ರೇಷ್ಮೆಗಿರುವ ಗುಣ ಮತ್ತು ದೃಢತೆಯಿಂದಾಗಿ, ರುದ್ರಾಕ್ಷವನ್ನು ಧರಿಸುವಾಗ ರೇಷ್ಮೆ ದಾರವನ್ನು ಬಳಸುವುದು ಅತ್ಯುತ್ತಮ. ತೆಳುವಾದ ಚಿನ್ನ ಅಥವಾ ಬೆಳ್ಳಿಯ ಸರವನ್ನೂ ಬಳಸಬಹುದು. ಆದರೆ ಪೋಣಿಸುವ ಪ್ರಕ್ರಿಯೆಯಲ್ಲಿ ರುದ್ರಾಕ್ಷ ಮಣಿಗಳು ಬಿರುಕು ಬಿಡದಂತೆ ಅಥವಾ ಹಾನಿಗೊಳಪಡದಂತೆ ಅತ್ಯಂತ ಕಾಳಜಿ ವಹಿಸಬೇಕು.
ಪಂಚಮುಖಿ ಮಾಲೆಯ ತುದಿಗೆ ಕಟ್ಟುವ ಸಲುವಾಗಿ, ಅಥವಾ ರೇಷ್ಮೆಯ ದಾರ ಅಥವಾ ಚಿನ್ನ ಅಥವಾ ಬೆಳ್ಳಿಯ ಸರಕ್ಕೆ ಕಟ್ಟುವ ಸಲುವಾಗಿ, ಗೌರಿಶಂಕರ ರುದ್ರಾಕ್ಷವು ಒಂದು ಲೋಹದ ಕುಣಿಕೆಯೊಂದಿಗೆ ಬರುತ್ತದೆ. ಗೌರಿಶಂಕರ ಮಣಿಯನ್ನು ಪಂಚಮುಖಿ ಮಾಲೆಗೆ ಸೇರಿಸುವಾಗ ಬಿಂದು ಮಣಿಯನ್ನು ಅದರದ್ದೇ ಸ್ಥಾನದಲ್ಲಿ ಬಿಡುವುದು ಮುಖ್ಯ. ಗೌರಿಶಂಕರವನ್ನು ಬಿಂದು ಮಣಿಯ ಕೆಳಗೆ ಹೆಚ್ಚುವರಿ ಮಣಿಯಾಗಿ ಸೇರಿಸಬೇಕು. ಬಿಂದು ಮಣಿಯು ಮುಖ್ಯವಾದದ್ದು. ಏಕೆಂದರೆ ಮಾಲೆಯಲ್ಲಿನ ಪ್ರಾಣಶಕ್ತಿಯ ಸಂವಹನೆಯ ವೃತ್ತಾಕಾರವಾಗಿ ಚಲಿಸುತ್ತಿಲ್ಲ ಎಂಬುದನ್ನು ಅದು ಖಚಿತಪಡಿಸುತ್ತದೆ. ಶಕ್ತಿಯು ವೃತ್ತಾಕಾರದಲ್ಲಿ ಚಲಿಸಿದರೆ ಅದು ಕೆಲವರಲ್ಲಿ ತಲೆತಿರುಗುವಿಕೆಯನ್ನು ಉಂಟುಮಾಡಬಲ್ಲದು.
ಸದ್ಗುರು: ಸಾಂಪ್ರದಾಯಿಕವಾಗಿ, ಅದು ತಮ್ಮ ಜೀವನದ ಪವಿತ್ರ ಕರ್ತವ್ಯ ಎಂದು ಪರಿಗಣಿಸಿದ್ದ ವ್ಯಕ್ತಿಗಳೇ ರುದ್ರಾಕ್ಷ ಮಾಲೆಯನ್ನು ನಿರ್ಮಿಸುತ್ತಿದ್ದರು. ತಲತಲಾಂತರಗಳಿಂದಲೂ ಅವರು ಅದನ್ನೇ ಮಾಡುತ್ತಿದ್ದರು. ಅದರಿಂದ ಅವರು ತಮ್ಮ ಜೀವಿತವನ್ನೂ ನಡೆಸುತ್ತಿದ್ದರು. ಆದರೆ ಮೂಲಭೂತವಾಗಿ ಅದು ಅವರಿಗೆ ರುದ್ರಾಕ್ಷವನ್ನು ಜನರಿಗೆ ಸಮರ್ಪಿಸುವ ಒಂದು ಪವಿತ್ರ ಕರ್ತವ್ಯವಾಗಿತ್ತು. ಆದರೆ ಬೇಡಿಕೆಯು ಹೆಚ್ಚಾದಾಗ ವಾಣಿಜ್ಯವು ಪ್ರಧಾನವಾಯಿತು. ಇಂದು ಭಾರತದಲ್ಲಿ ಭದ್ರಾಕ್ಷ ಎಂಬ ಇನ್ನೊಂದು ಬೀಜವು ಲಭ್ಯವಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಹೆಚ್ಚಾಗಿ ಬೆಳೆಯುವ ಇದು ವಿಷಯುಕ್ತವಾದುದು. ನೋಡಲು ಎರಡೂ ಬೀಜಗಳು ಒಂದೇ ರೀತಿಯಾಗಿರುತ್ತವೆ. ಯಾವುದೇ ವ್ಯತ್ಯಾಸವೂ ಕಾಣಬರುವುದಿಲ್ಲ. ನೀವು ಸೂಕ್ಷ್ಮಗ್ರಾಹಿಯಾಗಿದ್ದು ಅದನ್ನು ನಿಮ್ಮ ಕೈಯಲ್ಲಿಟ್ಟುಕೊಂಡರೆ ಮಾತ್ರ ನಿಮಗೆ ವ್ಯತ್ಯಾಸವು ತಿಳಿಯುವುದು. ಭದ್ರಾಕ್ಷವನ್ನು ದೇಹದ ಮೇಲೆ ಧರಿಸಬಾರದು. ಆದರೆ ಹಲವೆಡೆ ಇದನ್ನು ರುದ್ರಾಕ್ಷ ಎಂದು ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ನೀವು ನಿಮ್ಮ ಮಾಲೆಯನ್ನು ನಂಬಲರ್ಹವಾದ ಮೂಲದಿಂದ ಪಡೆಯುವುದು ಮುಖ್ಯ.
ಹದಗೊಳಿಸುವುದು
ಹದಗೊಳಿಸುವ ಪ್ರಕ್ರಿಯೆಯು ರುದ್ರಾಕ್ಷವು ಗಟ್ಟಿಯಾಗಿ ಬಿರುಕುಬಿಡುವುದನ್ನು ತಪ್ಪಿಸಿ ಅವುಗಳ ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ಆಗಿದೆ. ತುಪ್ಪ ಅಥವಾ ಹಾಲಿನಲ್ಲಿ ಆರು ತಿಂಗಳಿಗೊಮ್ಮೆ ಮುಳುಗಿಸಿಡುವುದು ಮತ್ತು 1-2 ವರ್ಷಗಳಿಗೊಮ್ಮೆ ಎಳ್ಳೆಣ್ಣೆಯಲ್ಲಿ ಮುಳುಗಿಸಿಡುವುದು ರುದ್ರಾಕ್ಷದ ದೃಢತೆಗೆ ಸಹಾಯಕಾರಿ. ಹದಗೊಳಿಸುವುದು ರುದ್ರಾಕ್ಷವನ್ನು ಪುನಶ್ಚೈತನ್ಯಗೊಳಿಸುವುದಿಲ್ಲ. ರುದ್ರಾಕ್ಷ ಮಣಿಗಳು ನೈಸರ್ಗಿಕವಾಗಿಯಷ್ಟೇ ನಿರ್ದಿಷ್ಟ ಗುಣವನ್ನು ಹೊಂದಿದೆ.
ರುದ್ರಾಕ್ಷವನ್ನು ಹದಗೊಳಿಸಿದ ನಂತರ ಅದು ಸ್ವಲ್ಪ ನುಣುಪಾಗಬಹುದು, ಮತ್ತು ತುಪ್ಪ ಮತ್ತು ಹಾಲಿನ ವಾಸನೆ ಬರಬಹುದು. ಹೆಚ್ಚಿನ ಜಿಡ್ಡಿನ ಅಂಶವನ್ನು ಹೋಗಲಾಡಿಸಲು ರುದ್ರಾಕ್ಷವನ್ನು ವಿಭೂತಿಯಿಂದ ಮುಚ್ಚಬಹುದು. ನಿಮ್ಮ ಅಂಗೈಯಲ್ಲಿ ಸ್ವಲ್ಪ ವಿಭೂತಿಯನ್ನು ತೆಗೆದುಕೊಂಡು ರುದ್ರಾಕ್ಷವನ್ನು ಮೆದುವಾಗಿ ಅದರಲ್ಲಿ ಹೊರಳಿಸಬೇಕು. ಇದನ್ನು ಮಾಡುವ ಮೊದಲು ರುದ್ರಾಕ್ಷವನ್ನು ನೀರು ಅಥವಾ ಸೋಪಿನಿಂದ ತೊಳೆಯಬಾರದು. ಹಾಲಿನಿಂದ ತೆಗೆದ ತಕ್ಷಣವೇ ರುದ್ರಾಕ್ಷಕ್ಕೆ ವಿಭೂತಿ ಹಚ್ಚಬೇಕು.
ರುದ್ರಾಕ್ಷವನ್ನು 24 ಗಂಟೆಗಳ ಕಾಲ ತುಪ್ಪದಲ್ಲಿ ಹದಗೊಳಿಸಿದ ನಂತರ, ತುಪ್ಪವನ್ನು ಗಿಡಗಳಿಗೆ ಹಾಕಬಹುದು, ದೀಪವನ್ನು ಹಚ್ಚಲು ಬಳಸಬಹುದು, ಅಥವಾ ಮುಂದಿನ ಸಲ ರುದ್ರಾಕ್ಷವನ್ನು ಹದಗೊಳಿಸಲು ಬಳಸಬಹುದು. ಈ ತುಪ್ಪವನ್ನು ಸೇವಿಸುವುದಾಗಲೀ ಅಡುಗೆಗೆ ಬಳಸುವುದಾಗಲೀ ಮಾಡಬಾರದು.
ಕೊಂಡುಕೊಂಡ ನಂತರ ರುದ್ರಾಕ್ಷವನ್ನು ಮೊದಲ ಬಾರಿ ಹದಗೊಳಿಸುವಾಗ ಮಣಿಗಳಿಂದ ಸ್ವಲ್ಪ ಸ್ರಾವ ಉಂಟಾಗಬಹುದು. ಅದು ಬೇರೆ ಬೇರೆ ಬಣ್ಣಗಳಲ್ಲಿ ಇರಬಹುದು, ಆದರೆ ಸಾಧಾರಣವಾಗಿ ಅದು ಹಳದಿ ಅಥವಾ ಕಪ್ಪು ಬಣ್ಣದ್ದಾಗಿರುತ್ತದೆ. ಇದು ಏಕೆಂದರೆ ರುದ್ರಾಕ್ಷವನ್ನು ಬೆಳೆಯುವವರಿಂದ ಅದನ್ನು ಪಡೆದುಕೊಂಡ ನಂತರ ಅದನ್ನು ಮಣ್ಣಿನಿಂದ ಮುಚ್ಚುವ ಒಂದು ರಕ್ಷಣಾ ಪ್ರಕ್ರಿಯೆಯನ್ನು ಮಾಡಲಾಗುತ್ತದೆ ರುದ್ರಾಕ್ಷಕ್ಕೆ ಮಣ್ಣನ್ನು ಹಚ್ಚಿದಾಗ, ಆ ಮಣಿಯು ತನ್ನ ಮೂಲ ಸ್ಥಿತಿಯಲ್ಲಿಯೇ, ಅಂದರೆ ಮರದಿಂದ ತೆಗೆದಾಗ ಹೇಗಿತ್ತೋ ಹಾಗೆಯೇ ಇರುವುದನ್ನು ಅದು ಖಚಿತಪಡಿಸುತ್ತದೆ. ಮಣ್ಣಿನ ಮೂಲವನ್ನು ಅವಲಂಬಿಸಿ ಸ್ರಾವದ ಬಣ್ಣವು ಬದಲಾಗುತ್ತದೆ.
ರುದ್ರಾಕ್ಷವು ಅದು ಹೀರಿಕೊಳ್ಳುವ ಪದಾರ್ಥಗಳಿಂದಾಗಿ ಕಾಲಾಂತರದಲ್ಲಿ ಗಾಢ ಬಣ್ಣಕ್ಕೆ ತಿರುಗುತ್ತದೆ. ಇದು ಹದಗೊಳಿಸುವ ಪ್ರಕ್ರಿಯೆಯಲ್ಲಿ ಬಳಸುವ ತುಪ್ಪ, ಹಾಲು ಮತ್ತು ಎಳ್ಳೆಣ್ಣೆಯಿಂದಾಗಿ, ಮತ್ತು ನಿಮ್ಮ ದೇಹದ ಜಿಡ್ಡು ಮತ್ತು ಬೆವರಿನಿಂದಾಗಿಯೂ ಆಗುತ್ತದೆ. ಇದು ಸ್ವಾಭಾವಿಕ; ಇದಕ್ಕೂ ಯೋಗಿಕ ಸಾಧನೆಗೂ ಸಂಬಂಧವಿಲ್ಲ.